# ಗಂಡನ ದುಶ್ಚಟದಿಂದ ಬೇಸತ್ತ 8 ತಿಂಗಳ ಗರ್ಭಿಣಿ ಹೆಂಡತಿ ನೇಣಿಗೆ ಶರಣು | ಹೊರಜಗತ್ತಿಗೆ ಕಾಲಿಡಬೇಕಿದ್ದ ಕಂದಮ್ಮನ ಜೊತೆ ಸಾವಿನ ಹಾದಿ ಹಿಡಿದ ಅಮ್ಮ!

- Link: https://hosakannada.com/%e0%b2%95%e0%b2%be%e0%b2%b8%e0%b2%b0%e0%b2%97%e0%b3%8b%e0%b2%a1%e0%b3%81/pregnant-women-death/
- Published: 2022-03-15T10:09:34+00:00
- Author: ಹೊಸಕನ್ನಡ ನ್ಯೂಸ್

ಎಂಟು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕೇರಳ್ ಕಲ್ಲಾರದಲ್ಲಿರುವ
ಆಕೆಯ ಮನೆಯಲ್ಲಿ ನಡೆದಿದೆ.

Sponsored

ಮೃತ ಗರ್ಭಿಣಿಯನ್ನು ಭಾಗ್ಯ ( 21) ಎಂದು ಗುರುತಿಸಲಾಗಿದೆ. ಗಂಡನ ಮದ್ಯ ವ್ಯಸನದ ಕಾಟದಿಂದ ಖಿನ್ನತೆಗೆ
ಜಾರಿದ್ದ ಭಾಗ್ಯ, ಅದರಿಂದ ಹೊರಬರಲು ಸಾಧ್ಯವಾಗದೇ ತನ್ನ ಹೊಟ್ಟೆಯಲ್ಲಿದ್ದ ಕಂದಮ್ಮನ ಜೊತೆಗೆನೇ ಸಾವಿನ
ಹಾದಿ ಹಿಡಿದಿದ್ದಾಳೆ‌.

Advertisement

Advertisement

ಭಾನುವಾರ ಸಂಜೆ 4 ಗಂಟೆಗೆ ನೇಣು ಬಿಗಿದ‌ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ನೇಹಿತರೊಂದಿಗೆ ಸೇರಿ
ಪತಿ ಯಾವಾಗಲೂ ಮದ್ಯ ಸೇವಿಸಲು ಹೋಗುತ್ತಿದ್ದರಿಂದ ದಂಪತಿಗಳ ಮಧ್ಯೆ ಜಗಳ ಆಗುತ್ತಿತ್ತು.

ಈ ಘಟನೆ ಸಂಬಂಧ ಕಲ್ಲಾರ ಪೊಲೀಸರು ಭಾಗ್ಯಳ ಮೃತದೇಹವನ್ನು ಸರಕಾರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು,
ತನಿಖೆ ಕೈಗೊಂಡಿದ್ದಾರೆ.

Advertisement
