ಮದುವೆಗೆ ಬಂದ ಅತಿಥಿಗೆ ಸೋಂಕು | ಇನ್ನೇನು ನಡೆಯಬೇಕು ಮಹೋತ್ಸವ ಅನ್ನುವಷ್ಟರಲ್ಲಿ ಪೋಸ್ಟ್ ಫೋನ್ ಆಯಿತು ಫಸ್ಟ್ ನೈಟ್ !

ಮದ್ಯಪ್ರದೇಶ : ಮದುವೆಗೆ ಬಂದ ಅತಿಥಿ ತಂದ ಫಜೀತಿಯಿಂದಾಗಿ ನೂತನ ವಿವಾಹಿತ ಜೋಡಿಯ ಮಿಲನ ಮಹೋತ್ಸವ ಮತ್ತೆ ಕನಿಷ್ಟ ಹದಿನೈದು ದಿನಕ್ಕೆ ಮುಂದಕ್ಕೆ ಹೋಗಿದೆ. ಹುಡುಗ ಗೋಳೋ ಅಂತ ಅಳುತ್ತಿದ್ದಾನೆ.

ಸರ್ಕಾರದ ಅಗತ್ಯ ಅನುಮತಿ ಮೇರೆಗೆ ಮಧ್ಯಪ್ರದೇಶದ ಜಿಲ್ಲೆಯೊಂದರಲ್ಲಿ ವಧು ವರರ ವಿವಾಹ ನಡೆದಿತ್ತು. ವಿವಾಹ ಕಾರ್ಯಕ್ರಮದಲ್ಲಿ ಸುಮಾರು 95 ಮಂದಿ ಜನ ಭಾಗಿಯಾಗಿದ್ದರು. ಸಮಾರಂಭದಲ್ಲಿ ಹೊರರಾಜ್ಯದ ಅತಿಥಿಗಳು ಭಾಗಿಯಾಗಿದ್ದರು. ಅಂತೆಯೇ ದೆಹಲಿಯಿಂದ ಸಂಬಂಧಿಕರೊಬ್ಬರು ಮದುವೆಗೆ ಹಾಜರಾಗಿದ್ದರು. ಮದುವೆಯು ಸುಸೂತ್ರವಾಗಿ ನಡೆದಿತ್ತು.

ನವಜೋಡಿ ಮದುವೆ ಮುಗಿಸಿ ಮನೆಗೆ ಹೋಗಿದ್ದರು. ಅದಾಗಲೇ ಕತ್ತಲಾವರಿಸುತ್ತಿತ್ತು. ಆ ಮನೆಯವರ ಸಂಪ್ರದಾಯದಂತೆ ನೂತನ ವಧೂವರರಿಗೆ ಮೊದಲ ರಾತ್ರಿಯ ಸಂಭ್ರಮ. ಅದಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿದ್ದವು. ಅಷ್ಟರಲ್ಲಿ ಅಧಿಕಾರಿಗಳು ಮನೆಯ ಬಾಗಿಲು ಬಡಿದಿದ್ದರು.

ಅದ ಮನೆಗೆ ದೆಹಲಿಯಿಂದ ಅತಿಥಿಯಾಗಿ ಬಂದ ಸಂಬಂಧಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅದರ ಮಾಹಿತಿ ಪಡೆದ ಅಧಿಕಾರಿಗಳು ವಧು-ವರರು ಸಮೇತ ಎಲ್ಲಾ 95 ಜನರನ್ನು ಹೋಮ್ ಕ್ವಾರಂಟೈನ್ ಮಾಡಿದ್ದರು.

ಖುಷಿಖುಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ
ನೂತನವಾಗಿ ಮದುವೆಯಾಗಿದ್ದ ವಧು-ವರರು ಅದೇನೋ ಆಸೆಗಳನ್ನು ಇಟ್ಟುಕೊಂಡಿದ್ದರೋ ಏನೋ, ಕ್ವಾರಂಟೈನ್ ಕಾರಣದಿಂದ ಮಹೋತ್ಸವ ವನ್ನು ತಾತ್ಕಾಲಿಕವಾಗಿ ಮುಂದೂಡಬೇಕಾಗಿ ಬಂದಿದೆ. ಮದುವೆಗೆ ಬಂದ ಒಬ್ಬನೇ ಒಬ್ಬ ವ್ಯಕ್ತಿ ಆ ಜೋಡಿಯ ಮಧ್ಯೆ ಅಡ್ಡ ಗೋಡೆಯ ಥರ ದೊಡ್ಡದಾಗಿ ನಿಂತಿದ್ದಾನೆ. ಮಿಲನ ಮಹೋತ್ಸವದ ಸವಿಗನಸು ಕಾಣುತ್ತಿದ್ದ ಜೋಡಿಯು ಇದೀಗ ಆ ವ್ಯಕ್ತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

Leave A Reply

Your email address will not be published.